BSC 3rd Sem Kannada Test book ದಾರಿಯ ಬುತ್ತಿ
ದಾರಿಯ ಬುತ್ತಿ
-----------------------------------------------------
(ಬಿ.ಎಸ್ಸಿ. ೩ನೇ ಸೆಮಿಸ್ಟರ್ ಕನ್ನಡ ಪಠ್ಯ ಪುಸ್ತಕ)
ಪ್ರಧಾನ ಸಂಪಾದಕರು ಪ್ರೊ. ಎಸ್. ಎಂ. ಗಂಗಾಧರಯ್ಯ
ಸಂಪಾದಕರು
ಡಾ. ರಾಜಶೇಖರ ಬಸುಪಟ್ಟದ ಡಾ. ರಮೇಶ ಕೆ. ತೇಲಿ ಶ್ರೀ ಚಂದ್ರಶೇಖರ ಹೆಗಡೆ
ಪ್ರಸಾರಾಂಗ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ವಿದ್ಯಾಸಂಗಮ
ಬೆಳಗಾವಿ
೨೦೨೨ ರಿಂದ
-----------------------------------------------------
ಕುಲಪತಿಗಳ ನುಡಿ
ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರ ಅನುಷ್ಠಾನದ ಹಿನ್ನೆಲೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕ ಪಠ್ಯಗಳನ್ನು ಹೊಸ ವಿನ್ಯಾಸ ಮತ್ತು ಆಲೋಚನೆಗಳಿಂದ ರೂಪಿಸಿರುವುದು ಸಂತೋಷದ ಸಂಗತಿ. ಪ್ರಸ್ತುತ ಪಠ್ಯಗಳಲ್ಲಿ ಮುಂಬರುವ ಶೈಕ್ಷಣಿಕ ಅಗತ್ಯತೆಗಳನ್ನು ಹಾಗೂ ಸಾಂಸ್ಕೃತಿಕ ಆಶಯಗಳನ್ನು ಒಂದುಗೂಡಿಸಿ ವಿದ್ಯಾರ್ಥಿಗಳನ್ನು ಬರಲಿರುವ ಾಂಸ್ಕೃತಿಕ ಬಿಕ್ಕಟ್ಟುಗಳಿಗೆ ಸಂವಾದಿಯಾಗಿ ಅಣಿಗೊಳಿಸಬೇಕಾದ ಜವಾಬ್ದಾರಿಯನ್ನು ಮೆರೆಯಲಾಗಿದೆ. ಕನ್ನಡ ಭಾಷೆಯ ಪಠ್ಯಗಳು ಎಂದರೆ ಒಂದರ್ಥದಲ್ಲಿ ಸಮಕಾಲೀನ ಸಂದರ್ಭದ ಸಾಂಸ್ಕೃತಿಕ ಸಂಗತಿಗಳ ಅನಾವರಣವೇ ಆಗಿರುತ್ತದೆ ಹಾಗೂ ಅದರ ಬೆನ್ನಿಗೆ ಪರಂಪರೆಯ ಭಾರದ ಸಮತೂಕವು ಹೇರಲ್ಪಟ್ಟಿರುತ್ತದೆ. ಪರಂಪರೆ ಮತ್ತು ಸಮಕಾಲೀನ ಸಂದರ್ಭಗಳೆರಡನ್ನು ಪ್ರತಿನಿಧಿಸುವ ಮತ್ತು ಅತ್ಯಾಧುನಿಕವಾದ ಸಂಗತಿಗಳನ್ನು ವಾಗ್ವಾದಗಳಲ್ಲಿ ಹಿಡಿದಿಡುವ ಉಪಕ್ರಮಗಳನ್ನು ಅನುಸರಿಸಬೇಕಾಗುತ್ತದೆ.
ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ಒಂದರ್ಥದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ಸ್ವಾತಂತ್ರ್ಯವನ್ನು ಹಾಗೂ ಕಲಿಯಲು ಇಷ್ಟಪಡುವ ಸಂಗತಿಗಳ ಆಯ್ಕೆಯ ಸ್ವಾತಂತ್ರ್ಯವನ್ನು ಹೇರಳವಾಗಿ ಕಲ್ಪಿಸಿಕೊಟ್ಟಿದೆ. ಪ್ರಸ್ತುತ ಪಠ್ಯಗಳು ಅದಕ್ಕೆ ಪೂರಕವಾಗಿ ಸಿದ್ಧವಾಗಿವೆ. ವರ್ತಮಾನದ ಹಲವು ವಾಗ್ವಾದಗಳು ಮಾತ್ರವಲ್ಲ ಪರಂಪರೆಯ ಸಂಕಥನಗಳು ಪಠ್ಯಗಳಲ್ಲಿ ನೇಯಲ್ಪಟ್ಟಿವೆ. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಅನನ್ಯತೆಯುಳ್ಳ ಭಾಷಾಭಿಮಾನ, ವೈಜ್ಞಾನಿಕ ಮನೋಧರ್ಮ, ವಾಗ್ವಾದಗಳನ್ನು ರೂಪಿಸುವ, ಚರ್ಚೆಗೆ ಹಚ್ಚುವ, ಸಮಕಾಲೀನ ಸಂಗತಿಗಳಿಗೆ ಸ್ಪಂದಿಸುವ, ಮಾನವೀಯತೆ ಮತ್ತು ರಾಷ್ಟ್ರೀಯತೆಗಳಿಗೆ ಮಿಡಿಯುವ ಮನೋಧರ್ಮವನ್ನನುಸರಿಸಿ ಪಠ್ಯಗಳನ್ನು ಹೊಂದಿಸಿಕೊಳ್ಳಲಾಗಿದೆ. ಹಲವು ಆಲೋಚನಾ ಕ್ರಮಗಳನ್ನು ಮಾತ್ರವಲ್ಲ ತಾತ್ವಿಕ ಜಿಜ್ಞಾಸೆಗಳನ್ನು ಪಠ್ಯಗಳು ಹುಟ್ಟುಹಾಕುವ ಸಾಧ್ಯತೆಗಳನ್ನು ಕಂಡುಕೊಂಡು ವಿದ್ಯಾರ್ಥಿಗಳ ಮನೋವೈಜ್ಞಾನಿಕ ನೆಲೆಗಟ್ಟಿನ ಮೇಲೆ ಪ್ರಸ್ತುತ ಸಾಂಸ್ಕೃತಿಕ ಪಠ್ಯಗಳನ್ನು ಪಠ್ಯಪುಸ್ತಕಗಳನ್ನಾಗಿ ಪರಿವರ್ತಿಸಿಕೊಳ್ಳಲಾಗಿದೆ.
ಸಾಮಾಜಿಕ ಸೂಕ್ಷ್ಮತೆ, ವಿಮರ್ಶನಾ ಜಾಗರೂಕತೆ, ಚಿಕಿತ್ಸಕ ಮನೋಧರ್ಮ, ರಾಷ್ಟ್ರೀಯತೆ ಮತ್ತು ಮಾನವೀಯತೆಗಳಿಗೆ ಸ್ಪಂದಿಸುವ, ಸ್ವಕೀಯ ಆತ್ಮಪ್ರಜ್ಞೆಯ ಹಲವು ತಾತ್ವಿಕ ಸಂಘರ್ಷಗಳ ಭೂಮಿಕೆಯ ಮೇಲೆ ವಿದ್ಯಾರ್ಥಿಗಳ ಮನೋವಿಕಾಸವನ್ನು ಸಾಂಸ್ಕೃತಿಕ ಮೂಲದಿಂದ ಉತ್ಥಾನಗೊಳಿಸುವ ಆಲೋಚನೆಗಳು ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವುದರ ಹಿಂದೆ ಕೆಲಸ ಮಾಡಿವೆ. ವರ್ತಮಾನದ ಸನ್ನಿವೇಶಗಳು, ಜಾಗತಿಕ ಔದ್ಯೋಗಿಕ ಮಾರುಕಟ್ಟೆ, ಜ್ಞಾನಾಧಾರಿತ ಸಾಂಸ್ಕೃತಿಕ ಪ್ರಜ್ಞೆ, ಕನ್ನಡದ ಮಹೋನ್ನತ ಜ್ಞಾನ ಹಾಗೂ ಕನ್ನಡತನದ ಪ್ರಜ್ಞೆಗಳು ಪಠ್ಯಪುಸ್ತಕಗಳಲ್ಲಿ ಥೀಮ್‌ಗಳ ರೂಪದಲ್ಲಿ ಹೊರಬಂದಿರುವುದು ಗಮನಿಸಬೇಕಾದ ಸಂಗತಿ. ಇಂತಹ ಪಠ್ಯಗಳನ್ನು ರೂಪಿಸುವಲ್ಲಿ ಸ್ನಾತಕ ಅಭ್ಯಾಸ ಮಂಡಳಿಯು ನಿರಂತರ ಸಮಾಲೋಚಿಸಿ ಹೊಸ ಸಂವೇದನೆಗಳಿಗೆ ಸರಿಹೊಂದುವ ಪಠ್ಯಗಳನ್ನು ಆಯ್ಕೆ ಮಾಡಿ ಪುಸ್ತಿಕೆಯ ರೂಪದಲ್ಲಿ ನೀಡುತ್ತಿರುವುದು ಸಂತೋಷದ ಸಂಗತಿ. ಆದುದರಿಂದ ಕನ್ನಡ ಸ್ನಾತಕ ಅಭ್ಯಾಸ ಮಂಡಳಿಯ ಅಧ್ಯಕ್ಷರಾದ ಪ್ರೊ. ಎಸ್.ಎಂ. ಗಂಗಾಧರಯ್ಯ ಹಾಗೂ ಇತರ ಸದಸ್ಯರಾದ ಡಾ. ವೈ.ಬಿ. ಹಿಮ್ಮಡಿ ಹಾಗೂ ಡಾ. ಎಸ್. ಆಯ್. ಬಿರಾದಾರ ಅವರ ಪ್ರಯತ್ನವನ್ನು ಅಭಿನಂದಿಸುವ ಜವಾಬ್ದಾರಿ ನನ್ನದಾಗಿದೆ. ಅಲ್ಲದೇ ಪ್ರಸಾರಾಂಗದಿಂದ ಕನ್ನಡ ಪಠ್ಯಪುಸ್ತಕಗಳು ಪ್ರಥಮ ಆಧ್ಯತೆಯ ಮೇರೆಗೆ ಪ್ರಕಟಗೊಳ್ಳಬೇಕೆಂಬ ನನ್ನ ಮನದ ಬಯಕೆಯು ಈಡೇರಿದಂತಾಗಿದೆ. ಅದಕ್ಕಾಗಿ ಪ್ರಸಾರಾಂಗದ ನಿರ್ದೇಶಕರಾದ ಡಾ. ಎಸ್.ಬಿ. ಆಕಾಶ ಹಾಗೂ ಸಹಾಯಕ ನಿರ್ದೇಶಕರಾದ ಡಾ. ಪಿ. ನಾಗರಾಜ ಅವರಿಗೆ ಅಭಿನಂದನೆಗಳನ್ನು ತಿಳಿಸುವೆ. ಪುಸ್ತಕಗಳನ್ನು ಅಂದವಾಗಿ ಮುದ್ರಿಸಿಕೊಟ್ಟ ಶಿವ ಆಫ್‌ಸೆಟ್ ಪ್ರಿಂಟರ್ಸ್‌ನ ಮಾಲಿಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳನ್ನು ಸಲ್ಲಿಸುವೆ.
ಪ್ರೊ. ಎಂ. ರಾಮಚಂದ್ರ ಗೌಡ
ಕುಲಪತಿಗಳು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
-----------------------------------------------------------
ಪರಿವಿಡಿ
ಘಟಕ - ೧ : ಮಾನವೀಯತೆ
೧. ವಚನಗಳು ಬಸವಣ್ಣ / ೩
೨. ಕೀರ್ತನೆಗಳು - ಪುರಂದರದಾಸ / ೬
೩. ತತ್ವಪದಗಳು ಶಿಶುನಾಳ ಶರೀಫ,ಕಡಕೋಳ ಮಡಿವಾಳಪ್ಪ / ೧೦
ಘಟಕ - ೨ : ಪ್ರವಾಸ
೪. ಭೀಮಸೇನ ವೃಷಿಕೇತುವಿನೊಂದಿಗೆ ಬದ್ರಾವತಿಗೆ ಹೋಗುವುದು - ಲಕ್ಷ್ಮೀಶ / ೧೯
೫. ಲಾಕಪ್ಪಿನಲ್ಲಿ ಕಳೆದ ಒಂದು ರಾತ್ರಿ - ಗೊರೂರು ರಾಮಸ್ವಾಮಿ ಅಯ್ಯಂಗಾರ್/ ೨೯
೬. ಕಟ್ಟುವೆವು ನಾವು - ಗೋಪಾಲಕೃಷ್ಣ ಅಡಿಗ | ೪೦
೭ ಒಬ್ಬ ನಿಷ್ಠಾವಂತ ಅಧ್ಯಾಪಕ - ಹಾ. ಮಾ. ನಾಯಕ / ೪೫
ಘಟಕ - ೩ ವಿಚಾರ ಕ್ರಾಂತಿ
೮. ವೈಚಾರಿಕತೆ - ಹೆಚ್. ನರಸಿಂಹಯ್ಯ / ೫೫
೯.ಶ್ರೇಷ್ಠತೆಯ ವ್ಯಸನ ಕೆ.ವಿ. ಸುಬ್ಬಣ್ಣ / ೬೪
೧೦. ವಚನಕಾರರ ದೃಷ್ಟಿಯಲ್ಲಿ ಸ್ತ್ರೀ ಸಂವೇದನೆ ಮತ್ತು ಭಾಷೆ -ಎಸ್. ಎಸ್. ಅಂಗಡಿ / ೮೦
೧೧. ದಾರಿಯ ಬುತ್ತಿ - ಶಂ. ಬಾ. ಜೋಶಿ / ೯೪
ಘಟಕ - ೪ : ಸಂಕೀರ್ಣ
೧೨. ಮಿಲರೇಪ ಡಾ. ಎಚ್.ಎಸ್. ಶಿವಪ್ರಕಾಶ / ೧೧೩
೧೩. ಅಂಗದೊಳಗ ಅಲಾಂವಿ ಆಡಿನ್ನಾ - ಶಿರಗೂರು ಕಲ್ಮಶ / ೧೧೭
೧೪. ಸೂರ್ಯ ಚಂದ್ರರಿಲ್ಲದ ನಾಡಿನಲ್ಲಿ - ಎಚ್. ಟಿ. ಪೋತೆ / ೧೨೧
೧೫. ಭಾಷಣ ಕಲೆ ಮತ್ತು ವ್ಯಕ್ತಿತ್ವ ವಿಕಸನ – ವಿಷ್ಣು ಎಂ. ಶಿಂದೆ / ೧೪೧
-----------------------------------------------------
ಮಾದರಿ ಪ್ರಶ್ನೆ ಪತ್ರಿಕೆ ಮತ್ತು ಅಂಕಗಳ ವಿವರ
ಅವಧಿ: ೨ ಗಂಟೆ
ಅಂಕಗಳು: ೬೦
ಪ್ರಶ್ನೆ-೧: ಪ್ರಬಂಧ ರೂಪದ ಪ್ರಶ್ನೆ
(೧ನೇ ಘಟಕಕ್ಕೆ ಸಂಬಂಧಿಸಿದ ಎರಡು ಪ್ರಶ್ನೆಗಳನ್ನು ಕೊಟ್ಟು ಒಂದಕ್ಕೆ ಉತ್ತರಿಸಲು ಹೇಳುವುದು) ೧೦ ಅಂಕಗಳು
ಪ್ರಶ್ನೆ-೨: ಪ್ರಬಂಧ ರೂಪದ ಪ್ರಶ್ನೆ
(೨ನೇ ಘಟಕಕ್ಕೆ ಸಂಬಂಧಿಸಿದ ಎರಡು ಪ್ರಶ್ನೆಗಳನ್ನು ಕೊಟ್ಟು ಒಂದಕ್ಕೆ ಉತ್ತರಿಸಲು ಹೇಳುವುದು) ೧೦ ಅಂಕಗಳು
ಪ್ರಶ್ನೆ-೩: ಪ್ರಬಂಧ ರೂಪದ ಪ್ರಶ್ನೆ
(೩ನೇ ಘಟಕಕ್ಕೆ ಸಂಬಂಧಿಸಿದ ಎರಡು ಪ್ರಶ್ನೆಗಳನ್ನು ಕೊಟ್ಟು ಒಂದಕ್ಕೆ ಉತ್ತರಿಸಲು ಹೇಳುವುದು) ೧೦ ಅಂಕಗಳು
ಪ್ರಶ್ನೆ-೪: ಪ್ರಬಂಧ ರೂಪದ ಪ್ರಶ್ನೆ
(೪ನೇ ಘಟಕಕ್ಕೆ ಸಂಬಂಧಿಸಿದ ಎರಡು ಪ್ರಶ್ನೆಗಳನ್ನು ಕೊಟ್ಟು ಒಂದಕ್ಕೆ ಉತ್ತರಿಸಲು ಹೇಳುವುದು) ೧೦ ಅಂಕಗಳು
ಪ್ರಶ್ನೆ-೫: ಬೇಕಾದ ಎರಡಕ್ಕೆ ಟಿಪ್ಪಣಿ ಬರೆಯುವುದು
(ಪ್ರತಿ ಘಟಕದಿಂದ ಆಯ್ದುಕೊಂಡ ನಾಲ್ಕು ಪ್ರಶ್ನೆಗಳನ್ನು ಕೊಟ್ಟು ೨ಕ್ಕೆ ಉತ್ತರಿಸಲು ಹೇಳುವುದು) ೧೦ ಅಂಕಗಳು
ಪ್ರಶ್ನೆ-೬: ಒಂದೇ ವಾಕ್ಯಗಳಲ್ಲಿ ಉತ್ತರಿಸುವುದು
(ಇಡೀ ಪಠ್ಯಕ್ಕೆ ಅನ್ವಯಿಸಿ ೧೦ ಪ್ರಶ್ನೆಗಳನ್ನು ಕೊಟ್ಟು ಎಲ್ಲಕ್ಕೂ ಉತ್ತರಿಸಲು ಹೇಳುವುದು) ೧೦ ಅಂಕಗಳು
-----------------------------------------------------
You can download this PDF 👇👇👇link