ಗಣಪತಿ ಸ್ತೋತ್ರ
-: ವಿಘ್ನ ನಿವಾರಕ ಪ್ರಾಥನೆ :-
ಶುಕ್ಲಾಂ ಭರಧರಂ ವಿಷ್ಣು ಶಶಿವರ್ಣಂ ಚತುರ್ಭುಜಂ ||
ಪ್ರಸನ್ನವದನಂ ಧ್ಯಾಯೇತ್ ಸರ್ವಂ ವಿಘ್ನೋಪಶಾಂತಯೇ ||
ಅರ್ಥ :-
ಶುಕ್ಲಾಂ ಬರಧರಂ- ಬಿಳಿಯಾದ ಬಟ್ಟೆಯನ್ನು ಧರಿಸಿರುವ
ವಿಷ್ಣುಂ- ಲಕ್ಷ್ಮೀಪತಿಯಾದ ನಾರಾಯಣನನ್ನು
ಶಶಿವರ್ಣಂ - ಬೆಳ್ಳಗಿನ ಬಣ್ಣದ
ಚತುರ್ಭುಜಂ- 4 ಭುಜಗಳುಳ್ಳ
ಪ್ರಸನ್ನ ವದನಂ- ಪ್ರಸನ್ನವಾದ ಮುಖವುಳ್ಳ
ಧ್ಯಾಯೇತ್- ಧ್ಯಾನ ಮಾಡಬೇಕು ಯಾಕೆಂದರೆ
ಸರ್ವ ವಿಘ್ನೋಪಶಾಂತಯೇ- ಕೆಲಸದಲ್ಲಿ ಯಾವುದೇ ವಿಘ್ನಗಳು ಒದಗಿದಾಗ ಪರಿಹಾರಕ್ಕಾಗಿ ಧ್ಯಾನ ಮಾಡಬೇಕು.
ಪ್ರಸನ್ನವದನನು ಶುಭ್ರವಾದ ವಸ್ತ್ರವನ್ನು , ಶುಭ್ರವಾದ ಬಣ್ಣವುಳ್ಳವನೂ ಎಲ್ಲ ಕಡೆ ವ್ಯಾಪಿಸಿದವನೂ ಆದ ನಾಲ್ಕು ತೋಳುಗಳುಳ್ಳ ಗಣಪತಿಯನ್ನು ಸಕಲ ವಿಘ್ನ ಪರಿಹಾರಕ್ಕೆ ಧ್ಯಾನಿಸಬೇಕು.
Tags:
ganapati
